
25th April 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಹಡಪದ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜ ವಾಗಿದ್ದು ಧ್ವನಿಯಿಲ್ಲದ ಸಮಾಜವಾಗಿದೆ ಎಂದು ಕೊಪ್ಪಳ ಜಿಲ್ಲಾ ಹಡಪದ ಸಮಾಜದ ನೂತನ ಅಧ್ಯಕ್ಷ ಹನುಮಂತಪ್ಪ ಸರಿಗಮ ಹೇಳಿದರು.
ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ರಾಜ್ಯ ಸರ್ಕಾರ ಹಡಪದ ಸಮಾಜಕ್ಕೆ ಎಲ್ಲಾ ರೀತಿಯ ನೆರವು ನೀಡಬೇಕು, ರಾಜ್ಯದಲ್ಲಿ ಹಡಪದ ಸಮಾಜ ಒಂಬತ್ತು ಲಕ್ಷ ಜನಸಂಖ್ಯೆ ಇದ್ದು ಆದರೆ 5 ಲಕ್ಷ ಎಂದು ತೋರಿಸಿರುವುದು ಸರಿಯಲ್ಲ ಸರಿಯಾದ ರೀತಿ ಸಂಖ್ಯೆ ತೋರಿಸುವಂತೆ ಸರಕಾರವನ್ನು ಒತ್ತಾಯಿಸಿದರು.
ಪದಾಧಿಕಾರಿಗಳಾಗಿ
ತಾಲೂಕ ಅಧ್ಯಕ್ಷರಾಗಿ ಅಂದಪ್ಪ ಸಂಗಾಪೂರ,ಉಪಾಧ್ಯಕ್ಷರಾಗಿ ವಿರುಪಾಕ್ಷಪ್ಪ ದೊಡ್ಡಮನಿ, ಬಸಾಪುರ.ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ ಹಡಪದ, ಭಾಗ್ಯನಗರ, ಸಹ ಕಾರ್ಯದರ್ಶಿ ನಿಂಗೆಶಪ್ಪ ಹಡಪದ, ಗೊಂಡಬಾಳ,
ಖಜಾಂಚಿ ಗವಿಸಿದ್ದಪ್ಪ ಹಡಪದ, ದದೇಗಲ್, ಉಪ ಖಜಾಂಚಿಯಾಗಿ ಕೋಟ್ರೇಶ ಹಡಪದ,
ನಿರ್ದೇಶಕರಾಗಿ ಮಾರುತೇಶ ಹಾಲಹಳ್ಳಿ, ಈರಣ್ಣ ಹಡಪದ, ದದೇಗಲ್, ಕಳಕಪ್ಪ ಹಡಪದ, ಇರಕಲ್ಲಗಡ್, ಈಶ್ವರ ಸಾಹುಕಾರ್ ಬೇವಿನಾಳ, ವಿರೇಶ ಹಡಪದ ಕೋಳೂರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಡಪದ ಸಮಾಜದ ಜಿಲ್ಲಾ ಉಪಾಧ್ಯಕ್ಷ ಗುಂಡಪ್ಪ ಹಡಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಕಾಟ್ರಳ್ಳಿ, ಯುವ ಘಟಕದ ಅಧ್ಯಕ್ಷ ಬಸವರಾಜ ಹಡಪದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಪ್ಪ ಹಡಪದ, ಕೊಪ್ಪಳ ತಾಲೂಕು ಅಧ್ಯಕ್ಷ ಅಂದಪ್ಪ ಹಡಪದ ಉಪಸ್ಥಿತರಿದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ